ಹಲೋ ಸ್ನೇಹಿತರೇ ನಮಸ್ಕಾರ. ನೀವು ಇನ್ನೂ ಉತ್ತಮ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ವಿಶೇಷವಾಗಿ ವೈದ್ಯಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಪಡೆಯಬೇಕೆಂಬ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಇಂದಿನ ಈ ಮಾಹಿತಿಯನ್ನು ನೀವು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ .
ಕರ್ನಾಟಕ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾದ ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಇದೀಗ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಇದು ಉದ್ಯೋಗ ಹುಡುಕುತ್ತಿರುವವರಿಗೆ ದೊಡ್ಡ ಗೂಡ್ ನ್ಯೂಸ್ ಎಂದೇ ಹೇಳಬಹುದು.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ವೈದ್ಯಕೀಯ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 13 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವೃತ್ತಿಜೀವನವನ್ನು ಕರ್ನಾಟಕ ಸರ್ಕಾರದಲ್ಲಿ ಆರಂಭಿಸಬಹುದು.
ಹುದ್ದೆಗಳ ಸಂಪೂರ್ಣ ಮಾಹಿತಿ:
ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ
ಒಟ್ಟು ಹುದ್ದೆಗಳು: 13
ಹುದ್ದೆಗಳ ಹೆಸರು: ವೈದ್ಯಕೀಯ ಅಧಿಕಾರಿ, ತಾಂತ್ರಿಕ ಅಧಿಕಾರಿ
ಉದ್ಯೋಗ ಸ್ಥಳ: ಬೆಂಗಳೂರು
ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ:
ಈ ನೇಮಕಾತಿಯ ಮತ್ತೊಂದು ಮುಖ್ಯ ವೈಶಿಷ್ಟ್ಯವೆಂದರೆ, ವಿವಿಧ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಕೆಳಗಿನ ಪದವಿಗಳಲ್ಲಿ ಯಾವುದಾದರೂ ಹೊಂದಿದ್ದರೆ ನೀವು ಅರ್ಜಿ ಸಲ್ಲಿಸಬಹುದು:
ಡಿಪ್ಲೊಮಾ / ಯಾವುದೇ ಪದವಿ
BCA, BE /B.TECH
BDS, BAMS, MBBS, MD
LLB, MBA, MHA, MCA
ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ
ಅಂದರೆ ವೈದ್ಯಕೀಯ ಹಾಗೂ ತಾಂತ್ರಿಕ ಎರಡೂ ಕ್ಷೇತ್ರದ ಅಭ್ಯರ್ಥಿಗಳಿಗೆ ಇದು ಸೂಕ್ತ ಅವಕಾಶವಾಗಿದೆ.
ವೇತನ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹18,000 ರಿಂದ ₹80,000 ರವರೆಗೆ ವೇತನ ನೀಡಲಾಗುತ್ತದೆ .ಈ ವೇತನವು ಹುದ್ದೆ ಹಾಗೂ ಅನುಭವದ ಮೇಲೆ ಅವಲಂಬಿತವಾಗಿರುತ್ತದೆ.
ಹೊಸದಾಗಿ ಉದ್ಯೋಗ ಪ್ರಾರಂಭಿಸುವವರಿಗೂ ಹಾಗೂ ಅನುಭವ ಹೊಂದಿರುವವರಿಗೂ ಇದು ಉತ್ತಮ ಅವಕಾಶ.
ವಯೋಮಿತಿ:
ಗರಿಷ್ಠ ವಯಸ್ಸು: 45 ವರ್ಷ
ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರಬಹುದು.
ಅರ್ಜಿ ಶುಲ್ಕ:
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ . ಇದು ಅಭ್ಯರ್ಥಿಗಳಿಗೆ ದೊಡ್ಡ ಪ್ಲಸ್ ಪಾಯಿಂಟ್.
ಆಯ್ಕೆ ವಿಧಾನ:
ನೇರ ಸಂದರ್ಶನ (Walk-in Interview)
ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನಿಮ್ಮ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಇದರಿಂದ ನಿಮ್ಮ ಸಮಯವೂ ಉಳಿಯುತ್ತದೆ.
ಸಂದರ್ಶನದ ಸಂಪೂರ್ಣ ವಿವರ:
ದಿನಾಂಕ: 06 ಏಪ್ರಿಲ್ 2026
ಸ್ಥಳ:ಮುಖ್ಯ ಆಡಳಿತಾಧಿಕಾರಿ ಕಚೇರಿರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ1ನೇ ಮಹಡಿ, ಪಶ್ಚಿಮ ವಿಭಾಗಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್ಬೆಂಗಳೂರು –560023
ಅಭ್ಯರ್ಥಿಗಳು ಸಮಯಕ್ಕಿಂತ ಮುಂಚಿತವಾಗಿ ಹಾಜರಾಗುವುದು ಉತ್ತಮ.
ಅರ್ಜಿ ಸಲ್ಲಿಸುವ ವಿಧಾನ:
ಈ ನೇಮಕಾತಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಹ ಅಭ್ಯರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನಕ್ಕೆ ಹೋಗುವಾಗ ಈ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ.
:ಮೂಲ ಶೈಕ್ಷಣಿಕ ಪ್ರಮಾಣಪತ್ರಗಳು
:ಗುರುತಿನ ಚೀಟಿ (Aadhar/ID Proof)
:ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಅನುಭವ ಪ್ರಮಾಣಪತ್ರಗಳು (ಇದ್ದರೆ)
: ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು ಹೋಗುವುದು ಮುಖ್ಯ.
ಮುಖ್ಯ ಸೂಚನೆ:
ಈ ರೀತಿಯ ಅವಕಾಶಗಳು ತುಂಬಾ ಕಡಿಮೆ ಬರುತ್ತವೆ. ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಇದು. ಆದ್ದರಿಂದ ನೀವು ಅರ್ಹರಾಗಿದ್ದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ವೈದ್ಯಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದರೆ, ಅವರಿಗೆ ಕೂಡಲೇ ಈ ಮಾಹಿತಿಯನ್ನು ಹಂಚಿಕೊಳ್ಳಿ.